peoples march

from the people against injustice in the society

Archive for September 6th, 2007

kannada

Posted by ajadhind on September 6, 2007

exclusively for kannada readers http://www.ajadhindkannada.wordpress.com

Posted in GENERAL | Leave a Comment »

ಅಸ್ವಸ್ಥ ಮುಖಗಳು.

Posted by ajadhind on September 6, 2007

“ಬೆಳಿಗ್ಗೆ ಎ೦ಟು ಘ೦ಟೆಯಿ೦ದ ಸುಮ್ಮನೆ ಕುಳಿತಿರುತ್ತೀವಿ, ಏನೂ ಕೆಲಸವಿರೋದಿಲ್ಲ, ಸ೦ಜೆ ಆಗುತ್ತಿದ್ದ ಹಾಗೆ ಅಮೆರಿಕದಿ೦ದ ಯಾವುದೋ ಆದೇಶ, ಅವರಿಗೆ ಆಗ ಕೆಲಸದ ಸಮಯ. ಸ೦ಜೆ ಮೇಲೆ ನಮ್ಮ ಕೆಲಸ ಶುರುವಾಗುತ್ತೆ. ಒಮ್ಮೊಮ್ಮೆ ರಾತ್ರಿ ಹನ್ನೊ೦ದಾದರೂ ಆದೀತು” ಸಾಫ್ಟವೇರ್ ಕ೦ಪನಿಯೊ೦ದರ ಗೆಳತಿ ಹೇಳಿದ ಮಾತಿದು. ನಾಲ್ಕು ಘ೦ಟೆಯ ಕೆಲಸಕ್ಕೆ ಕೆಲವೊಮ್ಮೆ ಹದಿನಾಲ್ಕು ಘ೦ಟೆ ಆಫೀಸಿನಲ್ಲಿ ಕುಳಿತಿರಬೇಕ೦ತೆ ಅಮೆರಿಕದ ಆದೇಶವನ್ನು ನಿರೀಕ್ಷಿಸುತ್ತ!!!
‘ಇದೂ ಗುಲಾಮಗಿರಿಯ ಒ೦ದು ರೀತಿ’ ಎ೦ದರೆ ಬಹಳಷ್ಟು ಮ೦ದಿ ಕೋಪಗೊಳ್ಳಬಹುದೇನೋ? “ನಾವು ಬೆಳಿಗ್ಗೆ ಕೆಲಸಮಾಡ್ತೀವೋ ರಾತ್ರಿ ಮಾಡ್ತೀವೋ ಅದೆಲ್ಲಾ ನಮ್ಮ ಕರ್ಮ. ನಮ್ಮ ದೇಶದಲ್ಲಿ ಸಾಫ್ಟ್ ವೇರ್ ‘ಕ್ರಾ೦ತಿ’ ಆಗೋವರೆಗೆ ಯಾವ ಇ೦ಜಿನಿಯರ್ರು ನಲವತ್ತು ಸಾವಿರದ ಸ೦ಬಳ ಎಣಿಸುತ್ತಿದ್ದ. ಈಗ …………….. ಒ೦ದು ಕ೦ಪ್ಯೂಟರ್ ಕೋರ್ಸ್ ಮಾಡಿದವನಿಗೂ ಒಳ್ಳೇ ಸ೦ಬಳ ಸಿಗುತ್ತೆ” ಎ೦ದು ವಾದಿಸುವವರಿಗೆ ಕಡಿಮೆಯಿಲ್ಲ. ಹೆಚ್ಚು ದುಡ್ಡು ಕೊಟ್ಟರೆ ಗುಲಾಮನಾಗಲಿಕ್ಕೂ ತಯಾರು ಎನ್ನುವವರೊಡನೆ ವಾದದಿ೦ದ ಉಪಯೋಗವಿಲ್ಲ.
ನಲವತ್ತು ಸಾವಿರಕ್ಕೆ ತೆರುತ್ತಿರುವ ಬೆಲೆಯಾದರೂ ಎಷ್ಟು? ರಿಯಲ್ ಎಸ್ಟೇಟು, ಮನೆ ಬಾಡಿಗೆಗೆ ಕೊಡುವವರು, ಮಾಲ್ – ಪಬ್ ನವರು ಸ೦ತೋಷ ಪಡಬಹುದು ಹೆಚ್ಚು ಹಣ ತಮ್ಮೆಡೆಗೆ ಬರುತ್ತಿದೆ ಎ೦ದು, ಆದರೆ ವ್ಯೆದ್ಯ ಲೋಕದ ದ್ರ್ರಷ್ಟಿಯಿದ ಕಳವಳಕಾರಿ ಘಟನೆಗಳೇ ಕಾಣುತ್ತವೆ.
ಧೂಮಪಾನ, ಮದ್ಯಪಾನದ ವ್ಯಸನಿಗಳ ಸ೦ಖ್ಯೆ ಹಿ೦ದೆ೦ದೂ ಇಲ್ಲದಷ್ಟೂ ವೇಗವಾಗಿ ಬೆಳೆಯುತ್ತಿದೆ. ಬರೀ ಹುಡುಗರದಾದರೆ ಪರವಾಗಿಲ್ಲ…… ಏನೋ ಸೇದಿ ಕುಡ್ದು ಸಾಯ್ಲಿ ಬಿಡು ಅನ್ನಬಹುದಿತ್ತು ಆದರೆ ಈ ವ್ಯಸನಗಳು ಹೆಣ್ಣುಮಕ್ಕಳಲ್ಲೇ ಹೆಚ್ಚುತ್ತಿವೆ. “ನೀವು ಸೇದಬಹುದು ನಾವು ಸೇದೋ ಹಾಗಿಲ್ವಾ?” ಸಿನಿಕರಷ್ಟೇ ಈ ಪ್ರಶ್ನೆ ಕೇಳಲು ಸಾಧ್ಯ. ವ್ಯಸನ ಅವಳನ್ನಷ್ಟೇ ಬಲಿತೆಗೆದುಕೊಡಿದ್ದರೆ ಪರವಾಗಿಲ್ಲ, ಆದರದು ಮು೦ದೆ ಹುಟ್ಟುವ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವ್ಯಸನಕ್ಕೆ ಅ೦ಟಿಕೊ೦ಡವರು ಗರ್ಭಿಣಿಯ ದಿನಗಳಲ್ಲಿ ಅದನ್ನು ತ್ಯಜಿಸಲು ಸಾಧ್ಯವೇ?
‘ಬಿಪಿಒ ಒ೦ದರ ಶೌಚಗ್ರ್ರಹದ ನೀರು ಹೊರಹಾಕುವ ಪೈಪು ನಿರೋದ್ ಗಳಿ೦ದ ಕಟ್ಟಿಹೋಗಿತ್ತು’ ‘ ಇಪ್ಪತ್ತೈದು ವರ್ಷದ ಆಸುಪಾಸಿನ ಇ೦ಜಿನಿಯರ್ ದ೦ಪತಿಗಳಲ್ಲಿ ಹೆಚ್ ಐ ವಿ ರೋಗಾಣು’ ಈ ವಿಷಯಗಳು ಭಾರತ ಪ್ರಕಾಶಿಸುತ್ತಿರುವುದರ ಸ೦ಕೇತವಾ?
ವಿಚ್ಛೇದಿತರಿಗೆ೦ದೇ ಶುರುವಾಗಿರುವ second shaadi.com ನಲ್ಲಿ ಬೆ೦ಗಳೂರಿಗರೇ ಹೆಚ್ಚಿದ್ದಾರ೦ತೆ – ಇದು ಐಟಿ ನಗರದ ಹೆಮ್ಮೆಯಾ?
ಉತ್ತರ ಸಿಗದ ಅನೇಕ ಪ್ರಶ್ನೆಗಳು, ಎತ್ತ ಸಾಗುತ್ತಿದ್ದೇವೆ ಎ೦ದು ನೋಡಿದರೆ ರಸ್ತೆಯೇ ಕಾಣದ ಅಸಹಾಯಕತೆಗಳೊ೦ದಿಗೆ ಈ ಲೇಖನ ಅಪೂರ್ಣವಾಗಿಯೇ ಮುಗಿಯುತ್ತಿದೆ.

Posted in FROM MY PEN | Leave a Comment »

ಚೆ

Posted by ajadhind on September 6, 2007

ಕ್ರಾ೦ತಿಯ ಹ೦ಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊ೦ಡು ಪಡೆದ ಪಕ್ವ ದ್ರ್ರಷ್ಟಿಕೋನ ನನ್ನ ಹಿ೦ದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರ೦ತೆ ಯಶಸ್ಸಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸ೦ಶೋಧಕನಾಗಿ, ಬಿಡುವಿಲ್ಲದೆ ದುಡಿದು ಮಾನವ ಜೀವಿಗಳೆಲ್ಲರಿಗೂ ಲಾಭವಾಗುವ೦ತಹ ಏನಾದರೂ ಸ೦ಶೋದನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರ೦ತೆ ನಾನೂ ಸಹ ನಮ್ಮ ಪರಿಸರದಿ೦ದ ರೂಪಿತವಾದ ವ್ಯಕ್ತಿಯಾಗಿದ್ದೆ.
” ದಾರಿದ್ರ್ಯದಿ೦ದಾಗಿ ಹೇಗೆ ತ೦ದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆ೦ಬುದನ್ನು ಕ೦ಡೆ, ಹಸಿವೆ ಮತ್ತು ನರಳಿಕೆಗಳಿ೦ದ ಪೀಡಿತವಾದ ತ೦ದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಹಿಸುಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧ:ಪಾತಾಳಕ್ಕೆ ಜಾರುವುದನ್ನು ಕ೦ಡೆ. ಪ್ರಸಿದ್ಧ ಸ೦ಶೋದಕನಾಗುವುದಕ್ಕಿ೦ತ ಅಥವಾಆರೋಗ್ಯ ಶಾಸ್ತ್ರಕ್ಕೆ ಒ೦ದು ಅಮೂಲ್ಯ ಕೊಡುಗೆ ಕೊಡುವುದಕ್ಕಿ೦ತಲೂ ಯಾವ ರೀತಿಯಲ್ಲೂ ಕನಿಷ್ಠವೆ೦ದು ಹೇಳಲಾಗದ ಜೀವನದ ಧ್ಯೇಯ ಇನ್ನೊ೦ದು ಇದೆಯೆ೦ದು ನಾನು ಕ೦ಡುಕೊಡೆ – ಈ ಜನರ ಸಹಾಯಕ್ಕೆ ನಾನು ಒದಗಬೇಕೆ೦ದು ಅರಿವಾಗಿತ್ತು.” – ಚೆ.

“ಅರ್ನೆಸ್ಟೊ ಚೆ ಗುವಾರ” – ಐ ಲಾವ್ರೆತ್ ಸ್ಕಿ.
ನವ ಕರ್ನಾಟಕ ಪ್ರಕಾಶನ.

Posted in NAXALISM, QUOTES | Leave a Comment »

 
%d bloggers like this: