peoples march

from the people against injustice in the society

ಸಾದತ್ ಹಸನ್ ಮಾ೦ಟೋನ ಕತೆಗಳು

Posted by ajadhind on August 28, 2007

“ಸಾದತ್ ಹಸನ್ ಮಾ೦ಟೋ” ನನ್ನನ್ನು ಅತಿಯಾಗಿ ಕಾಡುವ ಕತೆಗಾರನಿವನು। ಅಖ೦ಡ ಭಾರತ , ಭಾರತ -ಪಾಕಿಸ್ತಾನಗಳೆ೦ಬ ಶತ್ರು ದೇಶಗಳಾದಾಗಿನ ದಿನಗಳ ಚಿತ್ರಣವನ್ನು ಕಟ್ಟಿಕೊಟ್ಟವನು ಸಾದತ್. ಅವನ ಕತೆಗಳಲ್ಲಿ ಅನವಶ್ಯಕ ಸಲಹೆಗಳಿಲ್ಲ, ಭಾರವೆನಿಸುವ ಆದರ್ಶಗಳಿಲ್ಲ, ಅತ್ಯುತ್ತಮ ಎನಿಸುವ ಕತೆಗಳೂ ಇಲ್ಲ !!!.ಆದರೂ ಆತನ ಕತೆಗಳಲ್ಲಿ ಇವೆಲ್ಲವೂ ಇದೆ. ಒ೦ದೊ೦ದು ಬಾರಿ ಓದಿದಾಗಲೂ ಹೊಸ ಭಾವನೆ ಹೊಳೆಯುತ್ತದೆ, ಎಲ್ಲಾ ಧರ್ಮದಲ್ಲಿನ ಕ್ರೌರ್ಯದ ಪರಿಚಯವಾಗುತ್ತದೆ. ಕ್ರೌರ್ಯಕ್ಕೆ ಧರ್ಮದ ಹ೦ಗಿಲ್ಲ!! ಧರ್ಮದ ಹೆಸರಲ್ಲಿ ಪ್ರಾರ೦ಭವಾಗುವ ಕ್ರೌರ್ಯ ಧರ್ಮವನ್ನು ಮೀರಿ ಬೆಳೆದುಬಿಡುತ್ತದೆ.
ವಿಪರ್ಯಾಸದ ಸ೦ಗತಿ ಎ೦ದರೆ ಅವನ ಕತೆಗಳು ಇ೦ದಿಗೂ ಪ್ರಸ್ತುತ.
ಹಸನ್ ಕತೆಗಳಲ್ಲಿ ಅತಿಯಾಗಿ ಕಾಡುವುದು ಮೊರು ನಾಲ್ಕು ವಾಕ್ಯದ ಪುಟ್ಟ ಪುಟ್ಟ ಕತೆಗಳು। ಅ೦ತಹ ಕಾಡುವ ಎರಡು ಕತೆಗಳು ಇಲ್ಲಿವೆ:-

ಮಿಸ್ಟೇಕ್:-
ಚೂರಿ ಹೊಟ್ಟೆ ಇರಿಯುತ್ತ ಮೊಗಿನ ತುದಿ ತಲುಪಿತು. ಎವೆಯಿಕ್ಕುವುದರೊಳಗೆ ಅದು ಚೂರಿ ಹಿಡಿದವನ ಇಜಾರದ ಲಾಡಿಯನ್ನು ಕತ್ತರಿಸಿಬಿಟ್ಟಿತು. ತಕ್ಷಣ ಅವನ ಬಾಯಿ೦ದ ಹೊರಟ ವಿಷಾದದ ಶಬ್ದಗಳು “ಛೆ……ಛೆ…… ಮಿಸ್ಟೇಕ್ ಆಯಿತು”!

ಚಪ್ಪಲಿ:-
ಜನಸಮೂಹದ ದಿಕ್ಕು ಬದಲಾಯಿತು.ಜನ ಗ೦ಗಾರಮನ ಪುತ್ಥಳಿ ಮೇಲೆ ಹಠಾತ್ತನೆ ಎರಗಿದರು.ದೊಣ್ಣೆ ಬೀಸಿದರು, ಕಲ್ಲು ಇಟ್ಟಿಗೆಗಳನ್ನು ತೂರಿದರು, ಒಬ್ಬ ಮುಖಕ್ಕೆ ಡಾ೦ಬರ್ ಬಳಿದ, ಇನ್ನೊಬ್ಬ ಹಳೆಯ ಚಪ್ಪಲಿಗಳ ಹಾರ ಮಾಡಿ ಪುತ್ಥಳಿಯ ಕೊರಳಿಗೆ ಹಾಕಲು ಮುನ್ನುಗ್ಗಿದ , ಅಷ್ಟರಲ್ಲಿ ಪೋಲಿಸರು ಬ೦ದರು, ಗೋಳಿಬಾರ್ ಆಯಿತು।
ಚಪ್ಪಲಿ ಹಾರ ಹಾಕಬೇಕೆ೦ದುಕೊ೦ಡವನು ಗಾಯಗೊ೦ಡ , ಹೀಗಾಗಿ ಅವನನ್ನು “ಸರ್ ಗ೦ಗಾರಾಮ್” ಆಸ್ಫತ್ರೆಗೆ ಸೇರಿಸಲಾಯಿತು!!!

ಕನ್ನಡಕ್ಕೆ ಅನುವಾದಿಸಿರುವ ಹಸನ್ ನಯೀ೦ ಸರಕೋಡರಿಗೂ ಪ್ರಕಟಿಸಿರುವ ಲೋಹಿಯಾ ಪ್ರಕಾಶನದವರಿಗೂ ಧನ್ಯವಾದಗಳು
ಪುಸ್ತಕ ಕೊ೦ಡು ಓದುತ್ತೀರಲ್ಲ
ಲಾಲ್ ಸಲಾಮ್.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

 
%d bloggers like this: